Saturday, July 12, 2014

Tabla

Trust me, playing Tabla (or any musical instrument) is one of the best meditation technics! ... Of course, it certainly increases stress level in others, if the player is a mediocre! 

ಹೊಟ್ಟೆ ತುಂಬಲು ಏನು ಬೇಕು?

ಎಂಟನೂರು ರುಪಾಯಿ ಕೊಟ್ಟು,
ಎಂಭತ್ತು ನಿಮಿಷ ಕಾದು ಪಿಝಾ ತಿಂದ್ವಿ,
ಪರ್ಸು ಖಾಲಿ ಆತು!
ದಾರೀಲಿ ಬರುವಾಗ ಎಂಭತ್ತು ರುಪಾಯಿ ಕೊಟ್ಟು ಇಡ್ಲಿ ತಿಂದ್ವಿ,
ಹೊಟ್ಟೆ ತುಂಬಿತ್ತು!
 
(೨೬ ಏಪ್ರಿಲ್, ೨೦೧೪)

December 1

(03rd May, 2014 - ಡಿಸೆಂಬರ್ ೧ ಚಲನಚಿತ್ರದ ಬಗ್ಗೆ)
 
ಎಂಥಾ ಛೊಲೊ ಪಿಚ್ಚರ್ ಮಾಡೀರಿ ಯಪ್ಪಾ! ಮಸಾಲಿ ದ್ವಾಸಿ ತಿಂದ ನಾಲ್ಗಿಗೇ ಜ್ವಾಳದ ರೊಟ್ಟಿ ಗುರಳ್ಳ ಹಿಂಡಿ ತಿಂದಾಗ ಆದಷ್ಟು ಖುಷಿ ಆತು! ಬೆಂಗಳೂರ್ನ್ಯಾಗ ನೋಡಬೇಕು ಅನ್ನೋದ್ರೊಳಗ ಥೇಟರ್ ನ್ಯಾಗಿಂದ ತಗದ ಬಿಟ್ಟಿದ್ರು, ಅದಕ್ಕ ಮೈಸೂರಿಗೆ ಬಂದಾಗ ನೋಡಿ ಬಂದೆ. ಅಲ್ಲೆನೂ ...ಅರ್ಧಕರ್ಧ ಟಾಕೀಸು ಖಾಲಿ ಇತ್ತು. ಇದ ಥೀಮ್ ಇಟಗೊಂಡು ಅಮೀರ್ ಖಾನ್ ಮಾಡಿದ್ರ ಎಲ್ಲಾರೂ ಬ್ಲ್ಯಾಕ್ ನ್ಯಾಗ ನೋಡತಿದ್ರು! ಇರಲಿ... ಸಿನಿಮಾ ಬಗ್ಗೆ ಹೇಳಬೇಕಂದ್ರ, ಎಷ್ಟೋ ದಿನಾ ಆದಮ್ಯಾಲೆ ನನ್ನ ಕೊರಳ ಉಬ್ಬಿಸುವಷ್ಟು ಭಾವುಕನನ್ನಾಗಿಸಿದ ಚಿತ್ರ ಇದು! ಎರಡು ಮೂರು ಸೀನ್ ನ್ಯಾಗಂತೂ ನನ್ನ ಕಣ್ಣು ತುಂಬಕೊಂಡಿದ್ವು. ಹೆಂಡತಿ ಗಂಡಗ ಜೈಪುರ್ ಕಾಲು ಕೇಳು ಅಂದಾಗ ಅಂವ 'ನನಗ ಕುಂಟಗೊಂತ ನಡದು ರುಡಾ ಆಗೇತಿ ನಿನಗ ಒಂದು ರೆಷ್ಮಿ ಸೀರಿ ಕೆಳ್ತೀನಿ..' ಅನ್ನೋ ಸೀನು ಭಾಳಾ ಇಷ್ಟಾ ಆತು. ಈ ಸಿನಿಮಾದೊಳಗ ಯಾವ ಉತ್ಪ್ರೇಕ್ಷೆ ಇಲ್ಲ. ಎಲ್ಲಾ ಸರಳ ನಿರೂಪಣೆ, ಅಲ್ಲ್ಯಲ್ಲೆ ಹಾಸ್ಯ.. ಅದರಲ್ಲೇ ವ್ಯಂಗ್ಯ. ಹಳ್ಳಿಯೊಳಗ ಇನ್ನೂ ಇರುವ ಬಡತನ. ಆದ್ರೂ ಹಳ್ಳಿಗರ್ನ ಅವ್ರಷ್ಟಕ್ಕ ಅವರ್ನ ಬಿಟ್ರ ಆರಾಮ ಇರ್ತಾರ ಅಂತ ಅನಸ್ತದ. ಕೆಳಮಟ್ಟದ ಜೀವನಾ ಮಾಡಿ ಬಂದಂವ ಮುಖ್ಯಮಂತ್ರಿ ಆದ್ರ ಬಡವರ ಕಷ್ಟ ಅರ್ಥಾ ಮಾಡ್ಕೋತಾನ ಹೊರತು, ಒಂದು ದಿವ್ಸದ ಗ್ರಾಮವಾಸ್ತವ್ಯದಿಂದ ಅದು ಅರ್ಥಾ ಆಗೂದಲ್ಲ! ನಿವೇದಿತ, ಸಂತೋಷ್ ಹಾಗೂ ಸರೋಜಿನಿ ಅವರ್ದು ನೈಜ ಅಭಿನಯ. ನಿವೇದಿತ ನನಗ್ಯಾಕೋ ಸೌಂದರ್ಯ ಅವರ ನೆನಪು ತಂದರು.

ಗೆಳೆಯರಿಗೆಲ್ಲಾ ವಿನಂತಿ: ದಯವಿಟ್ಟು ಈ ಸಿನಿಮಾ ನೋಡಿ ಬರ್ರೀ!

Home sweet home!

Back to Janma bhoomi after a month!
ಇನ್ನು ಅಲ್ಲಿ ಕಳೆದ ದಿನಗಳ ಮೆಲುಕು. ಅಲ್ಲಿ ಹಾಗೆ ಮಾಡಿದ್ವಿ, ಇಲ್ಲಿ ಹೀಗ್ ಮಾಡಿದ್ವಿ, ಅವತ್ತು ಹಾಗ್ ಮಾಡಿದ್ರೆ ಚೆನ್ನಾಗಿತ್ತೇನೊ, ಅಲ್ಲಿ ಹೀಗೂ ಮಾಡಬಹುದಿತ್ತೇನೊ.... ಅನ್ನುವ ಯೋಚನೆಗಳು. ಬುದ್ಧನಿಗೆ ಮನೆ ಬಿಟ್ಟು ಹೋಗಿ ಬೋಧಿ ವೃಕ್ಷದ ಕೆಳಗೆ ಕುಂತ ಮೇಲೆ ಜ್ನ್ಯಾನೋದಯವಾದಂತೆ, ದೇಶ ಬಿಟ್ಟು ಎಷ್ಟೋ ದೂರದ ಮತ್ತೊಂದು ದೇಶದಲ್ಲಿದ್ದಾಗಲೂ ಹೀಗೆ ಅನಿಸುತ್ತದೆ! ಅದರ ಪರಿಣಾಮವಾಗಿ ಕೆಲವು ನಿರ್ಧಾರಗಳನ್ನ ತೊಗೊಂಡಿರ್ತೀವಿ! ವಾಪಸ್ಸು ಬಂದ ಮೇಲೆ ಹೀಗಿರಬೇಕು, ಹೀಗೇ ಮಾಡ್ಬೇಕು ಅಂತೆಲ್ಲ!! ಎಷ್ಟರ ಮಟ್ಟಿಗೆ ಬದಲಾಗ್ತೀನೋ ಗೊತ್ತಿಲ್ಲ. ಎಷ್ಟಂದ್ರೂ ನಾನು ನಾನೇ! ನಾನು ಬುಧ್ಧನಾಗಲು ಸಾಧ್ಯವಿಲ್ಲ ಅಲ್ಲವೆ? ಅದು ಒಂದು ರೀತಿಯಲ್ಲಿ ನನ್ನ ಹೆಂಡತಿ ಮಗಳ ಮಟ್ಟಿಗೆ ಒಳ್ಳೆಯದೇ! ನಾನಂತೂ ಅವರನ್ನು ಬಿಟ್ಟು ಹೋಗಲಾರೆ

(30th June 2014)